ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೀರಾಪೂರು,ತಾ||ಜಿ|| ರಾಯಚೂರು
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ
ಪೌಷ್ಟಿಕ ಆಹಾರ ಕುರಿತು ಮಾರ್ಗದರ್ಶನ ಮತ್ತು ಜಾಗೃತಿ
ಗ್ರಾಮ: ಮೀರಾಪೂರು ಪಂಚಾಯತಿ: ಇಡಪನೂರು
![]() |
Board |
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನದ ಅಡಿಯಲ್ಲಿ ಎರಡನೇ ವಾರದ ವಿಶೇಷ ಕಾರ್ಯಕ್ರಮ ಮಕ್ಕಳಿಗೆ ಪೌಷ್ಟಿಕ ಆಹಾರ ಕುರಿತು ಮಾರ್ಗದರ್ಶನ ಮತ್ತು ಜಾಗೃತಿ ಈ ವಿಶೇಷ ಅಭಿಯಾನವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೀರಾಪೂರು ಇಲ್ಲಿ ಆಯೋಜಿಸಲಾಯಿತು.
ಪೌಷ್ಟಿಕ ಆಹಾರದ ಪರಿಚಯ ಮಾಡಿಕೊಡುವ ಸಲುವಾಗಿ ಹಲವು ಬಗೆಯ ದವಸ ಧಾನ್ಯಗಳಾದ ಅಕ್ಕಿ, ರಾಗಿ, ಜೋಳ, ಸಜ್ಜೆ, ಗೋದಿ, ಹೆಸರು, ಉರುಳಿಕಾಳು, ಅಲಸಂದಿ, ಅಂಬ್ರೇಕಾಳು, ಮೆಟಿಗೆ ಕಾಳು, ಶೇಂಗಾ, ಕಡಲೆ ಇತ್ಯಾದಿ ಏಕದಳ ಹಾಗು ದ್ವಿದಳ ಧಾನ್ಯಗಳು, ಬಗೆ ಬಗೆಯ ತರಕಾರಿಗಳು, ಮೊಟ್ಟೆ, ಮಸಾಲೆ ಪದಾರ್ಥಗಳನ್ನು ಸಾಲು ಸಾಲಾಗಿ ತಟ್ಟೆಗಳಲ್ಲಿ ಎಲ್ಲ ಮಕ್ಕಳಿಗೂ ಕಾಣುವಂತೆ ಪ್ರದರ್ಶಿಸಲಾಯಿತು. ಪ್ರತಿ ಬಗೆಯ ಆಹಾರ ಪದಾರ್ಥಗಳಿಗೆ ಹೆಸರಿಸಿ ಮತ್ತು ಅವುಗಳ ಸೇವನೆಯಿಂದ ದೊರಕುವ ಪೋಷಕಾಂಶಗಳ ಹೆಸರುಗಳನ್ನೂ ಬರೆದು ಇಡಲಾಗಿತ್ತು. ಮುಖ್ಯ ಗುರುಗಳಾದ ಶ್ರೀಮತಿ ಸುಲೋಚನಾ ಇವರು ಕಾರ್ಯಕ್ರಮದ ವಿಶೇಷತೆಯನ್ನು ಮಕ್ಕಳಿಗೆ ತಿಳಿಸಿದರು.
ಶಿಕ್ಷಕರಾದ ಶಾಂತಮೂರ್ತಿ ಹಿರೇಮಠ ಇವರು ಮಕ್ಕಳಿಗೆ ಪೋಷಕಾಂಶಗಳಾದ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್, ಲಿಪಿಡ್ಸ್, ವಿಟಮಿನ್ಸ್ ಮತ್ತು ಮಿನರಲ್ಸ್, ಮೈಕ್ರೋ ನ್ಯೂಟ್ರಿಯೆಂಟ್ಸ್, ನಾರು ಮತ್ತು ಶುದ್ಧ ನೀರಿನ ಬಗ್ಗೆ ಪರಿಚಯ ಮಾಡಿಕೊಟ್ಟು ಮತ್ತು ಯಾವ ಯಾವ ಪೋಷಕಾಂಶಗಳು ಯಾವ ಆಹಾರದ ಸೇವನೆಯಿಂದ ದೇಹಕ್ಕೆ ದೊರಕುತ್ತದೆ ಎಂಬುದನ್ನು ಮಕ್ಕಳಿಗೆ ಪರಿಚಯ ಮಾಡಿಕೊಟ್ಟರು.
![]() |
ಇನ್ನು ವಿಶೇಷವಾಗಿ ಶ್ರೀ ನರಸಯ್ಯ ಹಿರಿಯ ಶಿಕ್ಷಕರು ಇವರು ನವ ಧಾನ್ಯಗಳಿಂದ ತಯಾರಿಸುವ ವಿಶೇಷ ಆರೋಗ್ಯಕರ ಆಹಾರಗಳಾದ ಜೋಳದ ಕಟಾಲಿ, ರಾಗಿ ಮುದ್ದೆ, ಕಾಳುಗಳಿಂದ ತಯಾರಿಸುವ ಸಾರು, ಅಂಬಲಿ, ರಾಗಿ ಗಂಜಿ, ವಿವಿಧ ಆರೋಗ್ಯಕರ ಪಾನೀಯಗಳನ್ನು ಮಕ್ಕಳಿಗೆ ಪರಿಚಯ ಮಾಡಿಕೊಟ್ಟು ಅವುಗಳ ವಿಶೇಷತೆ ಕುರಿತು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲ ಮಕ್ಕಳು ಸಂತಸದಿಂದ ಪೋಷಕಾಂಶಗಳು ಮತ್ತು ಅವುಗಳಿಂದಾಗುವ ಪ್ರಯೋಜನಗಳು ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಿ ದೇಹವನ್ನು ಹೇಗೆ ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು ಎಂದು ತಿಳಿದುಕೊಂಡರು. ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರ ಜೊತೆಗೆ ಮುಖ್ಯ ಅಡುಗೆಯವರು ಮತ್ತು ಸಹಾಯಕರು, ಅಂಗನವಾಡಿ ಸಹಾಯಕರು ಮತ್ತು ಪೋಷಕರು ಇದ್ದು ಮಾಹಿತಿ ಪಡೆದುಕೊಂಡರು. ಒಟ್ಟಾರೆಯಾಗಿ ಅರ್ಥಪೂರ್ಣವಾಗಿ ಈ ಅಭಿಯಾನವನ್ನು ಆಯೋಜಿಸಲಾಯಿತು.
ಧನ್ಯವಾದಗಳು.